ಈ ಭಾಗವನ್ನು "ಜೀವನ ಧರ್ಮ ಯೋಗ"ದ ಅಧ್ಯಾಯ ೩ (ಪ್ರಕರಣ ೪) ಯಿಂದ ಆಯಿದು ಬರೆದಿದ್ದೇನೆ.
ಕರ್ಮ ಎಂದರೆ ಕೆಲಸ. ಕರ್ಮ ಎರಡು ವಿಧ : (೧)ಪ್ರಾಕೃತ - ಅಪ್ರಯತ್ನವಾಗಿ ನಡೆಯುವ ಕೆಲಸಗಳು (ಪ್ರಾಣ ಕ್ರಿಯೆಗಳು) (೨) ಸ್ವಕೃತ - ಬುದ್ದಿಪೂರ್ವಕವಾಗಿ ಮಾಡುವ ಕೆಲಸಗಳು. ಇವು ಎರಡು ವಿಧ: (೨.೧) ಸತ್ಕರ್ಮ (೨.೨) ದುಷ್ಕರ್ಮ. ಈ ಎಲ್ಲ ಕರ್ಮಗಳಲ್ಲೂ ಮೂರು ವಿಧ: (ಅ) ಕರ್ಮ - ವಿಹಿತವಾದದ್ದನ್ನು ಮಾಡುವುದು (ಆ) ಅಕರ್ಮ - ಮಾಡದೆ ಬಿಡುವುದು; ಮಾಡಿದರೂ ಮಾಡದಂತಿರುವುದು (ಇ) ವಿಕರ್ಮ - ಹೇಗೆ ಮಾಡಬೇಕೋ ಹಾಗಲ್ಲದೆ ಬೇರೆ ರೀತಿ ಮಾಡುವುದು.
ಸತ್ಕರ್ಮ (೨.೧) ವೇ ಧರ್ಮ. ಇದರಲ್ಲಿ ಮೂರು ವಿಧ: ಮೊದಲನೆಯದು (೨.೧.೧) ಲೌಕಿಕ - ಲೋಕಸಾಮಾನ್ಯವಾದ ನೀತಿ (ಅಹಿಂಸೆ, ಶೌಚ, ಕ್ಷಮೆ, ವಿದ್ಯೆ). ಎರಡನೆಯ ಸತ್ಕರ್ಮ (೨.೧.೨) ವೈದಿಕ - ಇದರಲ್ಲಿ ಎರಡು ರೂಪ (೨.೧.೨.೧) ಸಂಸ್ಕಾರ - (ತೀರ್ಥ ಸ್ನಾನ, ವೇದಾಭ್ಯಾಸ, ವಿವಾಹ, ಕ್ಷೇತ್ರವಾಸ) (೨.೧.೨.೨) ಸಾಧನ - ಇವು ಮೂರು: ಯಜ್ಞ (ಅಂದರೆ ಪೂಜೆ - ಇನ್ನೊಬ್ಬರಿಗೆ ಸಂತೋಷಪಡಿಸಲು ನಾವು ಮಾಡುವ ಎಲ್ಲಾ ಕೆಲಸವೂ ಯಜ್ಞ) , ದಾನ (ದಾನ ಮಾಡಿದ ವಸ್ತುವಿನಲ್ಲಿ "ತನ್ನದು" ಎಂದು ಹೋಗಿ "ನ ಮಾಮ" ಸೇರಬೇಕು), ತಪಸ್ಸು (ಒಂದು ಮಹಾ ಉದ್ದೇಶಕ್ಕಾಗಿ ಸಂತತ ಪರಿಶ್ರಮ ಮಾಡುವುದು). ಮೂರನೆಯ ಸತ್ಕರ್ಮ (೨.೧.೩) ಪಾರಮಾರ್ಥಿಕ - ಪ್ರತಿಫಲದ ಅಪೇಕ್ಷೆ ಇಲ್ಲದೆ ಮಾಡುವ ಕೆಲಸ.
ಕರ್ಮವೆಂದರೆ "ಕರ್ಮಫಲ" ವೆಂದೂ ಅರ್ಥ ಉಂಟು. ಶಾಸ್ತ್ರವಿಚಾರವಿಹಿತವಾದ ಕರ್ಮದ ಅನುಷ್ಠಾನ ಮುಖ್ಯ.
ಕರ್ಮಕ್ಕೆ ಸ್ವತಂತ್ರ ಗುಣಗಳಿಲ್ಲ, ಅದು ಕರ್ಮಿಯನ್ನು ಅನುಸರಿಸುತ್ತದೆ. ಮನುಷ್ಯನ ಅಂತರಂಗವು ಬಹಿರಂಗದ ಮೂಲಕ ಹರಿದಾಗ ಅದು ಕರ್ಮವೆನಿಸುತ್ತದೆ. ನಾವು ಮಾಡುವ ಕೆಲಸ ನಮ್ಮ ಇಷ್ಟಾರ್ಥಸಾಧನೆಗಾಗಿಯೇ ಆದರೂ ಅದು ಯಜ್ಞವೆಂಬ, ಭಗವತ್ಸೇವೆ ಎಂಬ ಭಾವನೆಯಿಂದ ಮಾಡಿದರೆ ನಮ್ಮ ಅಹಂಭಾವ ಅಣಗಿ ಜೀವ ಶುದ್ದವಾಗುತ್ತದೆ.
Monday, November 5, 2007
Subscribe to:
Post Comments (Atom)
1 comment:
Nange siktu ninna blog :-). Chennagide...
Post a Comment