Sunday, November 4, 2007

About this Blog.

ನಮಸ್ಕಾರ, ಈ ಬ್ಲಾಗ್ ನ ವಿಷಯ ಡಿ. ವಿ. ಜಿ. ಅವರ ಸಾಹಿತ್ಯ ಮತ್ತು ಆ ಸಾಹಿತ್ಯದಲ್ಲಿ ಬರುವತಕ್ಕಂತಹ ವಿಷಯಗಳು. ಅವರ ಸಾಹಿತ್ಯದ ವಿಮರ್ಶೆ ಮಾಡಲು ಅವಶ್ಯವಾದ ಜ್ಞಾನವಾಗಲಿ ಅಥವಾ ಅನುಭವವಾಗಲಿ ನನ್ನಲ್ಲಿ ಇಲ್ಲ. ಅವರು ಬರೆದಿರುವ ಪುಸ್ತಕಗಳನ್ನ ಓದಿ, ಮತ್ತು ಆ ವಿಷಯಕ್ಕೆ ಸಂಬಂಧಪಟ್ಟ ಬೇರೆ ಪುಸ್ತಕಗಳನ್ನ ಓದಿ, ನನಗೆ ಅನಿಸಿದ್ದನ್ನು ಇಲ್ಲಿ ಬರಿಯೋ ಉದ್ದೇಶ. ಡಿ ವಿ ಜಿ ಅವರ ಸಾಹಿತ್ಯ ಓದಲು ಶುರು ಮಾಡಿ ಸುಮಾರು 4 ವರ್ಷ ಆಯಿತು. ಇದಕ್ಕೆ ನನಗೆ ಪರಿಚಯಿಸಿದವನು ನನ್ನ ಸ್ನೇಹಿತ ರವಿ ಶಂಕರ್. ನಾನು ಓದಿರುವ ಡಿ ವಿ ಜಿ ಪುಸ್ತಕಗಳು:
1. ಮಂಕುತಿಮ್ಮನ ಕಗ್ಗ
2. ಮರಳು ಮುನಿಯನ ಕಗ್ಗ
3. ಶ್ರೀಮಧ್ಬಗವಧ್ಗೀತ ತಾತ್ಪರ್ಯಾ ಅಥವಾ ಜೀವನ ಧರ್ಮ ಯೋಗ
4. ಸೌಂದರ್ಯ ಮತ್ತು ಸಾಹಿತ್ಯ
5. ಋತ ಸತ್ಯ ಮತ್ತು ಧರ್ಮ
6. ಬಾಳಿಗೊಂದು ನಂಬಿಕೆ
7. ಸಂಸ್ಕೃತಿ
8. ದೇವರು
9. ಪುರುಷಸೂಕ್ತ
10. ಮೈಸೂರಿನ ದಿವಾನರು
11. ಸಾಹಿತ್ಯ ಶಕ್ತಿ