ಮೋಡಿಯಲಿ ಜೀವನದಿ ಒಂದಾಗಿ
ಜೋಡಿ ಹಕ್ಕಿಗಳಾಗಿ ನಲಿದು
ನೋಡಿರ್ಪ ಜಾಗಗಳ ನಾವ್ ನೆನೆದು
ಕೂಡಿ ನಲಿಯಲು ಬಾಳ್ ಸ್ವರ್ಗ - ***
ಸಾಗಿದೆ ನಿಮ್ಮ ಪಯಣ ಇಪ್ಪತ್ತೈದು ಕಳೆದು
ಮಾಗಿದೆ ನವರಸಗಳ ಭಾವನೆಗಳಲಿ ಮಿಂದು
ನೀಗಿ ಸ್ವತ್ವದಾಷೆಯನು, ನವೋತ್ಸಾಹ ತುಂಬಲಿ
ಸಾಗಲು ಇನ್ನಿಪ್ಪತ್ತೈದು - ***
ನಿಮ್ಮ ನೀವ್ ತಿದ್ದಿಕೊಳಿ , ಪರರ ತಿದ್ದುವುದಿರಲಿ
ನಮುಚಿತವ ಮರೆಯದಿರಿ ಯತ್ನದಲಿ
ವ್ಯಾಮೋಹವಿಲ್ಲದ ಪ್ರೇಮ ಜೀವನದಿ ತುಂಬಿರೆ
ನಿಮಗೆ ಬಾಳ್ ಕಡಿದಲ್ಲ - ***
ತ್ಯಜಿಸಿ ತವರೂರ ಸಂಸಾರಿಯಾಗಿ, ಜೀವನದಿ
ಭುಜಿಸಿ ಮುಗ್ಧರಾಗದೆ ಭುಜಿಸಲಿಹುದನು
ಸಾಜಗಳ ಕೊಲ್ಲದೆ ಮಿತಿಯನರಿತು
ರಾಜಯೋಗವ ಭುಜಿಸಿದೆವೋ ನಾವ್ - ***
ಬೆಳೆಸಳನ್ಯೋನ್ಯ ಸಂಬಂಧ ಶ್ರಮಿಸಿದೆವು
ಕೆಲಭಾರಗಳ ವಹಿಸಿ ಕೆಲನೋವುಗಳ ಸಹಿಸಿ
ತಳಹದಿಯ ಒಡೆದೆವು ತಿದ್ದಿಕೆಯಲಿ ದುಡುಕಿ
ಫಲವಿದು ಸೋಗದರಿಸಿಕೆಯಲಿ - ***
ಕರಗಿ ತಿಳಿಯಾಯಿತು ಜೀವ ಬದುಕಿನುರಿಯಲಿ
ಮರೆತು ಯತ್ನವ ಲೋಪವೆಸಾಗಿ ಬಳಲಿದೆನು
ನರಕವ ಮನದಿ ನಿಲಿಸೆ ನಷ್ಟವಾರಿಗೋ ಮರುಳೆ
ಗುರುತನವ ತಾಳದಿರು - ***
ಮುಟ್ಟಲೆಂದು ತುದಿಯ ಜಿಗಿಯುತಲಿರುವುದು
ಮುಟ್ಟುವುದು ಎಲ್ಲೋ ಮಧ್ಯದಲಿ
ಪಟ್ಟು ತೃಪ್ತಿಯ ಜಿಗಿದೆನೆಂದು , ಅಳತೆಯಮರೆತು
ಕೊಟ್ಟ ಎತ್ತರವ ಬಳಸೋ - ***
ಕೊರತೆಯುಂಟು ಜಿಗಿಯುವನಲೋ, ಜಿಗಿತದಲೋ
ಅರಿತನದನು ಮತ್ತೆ ಜಿಗಿಯುವುದ ಕಾಣೋ
ಮರೆತು ನೀ ಅಳತೆಯ, ಯತ್ನವ ಬಿಡದಿರು
ಇರುವತನಕ ಮುಗ್ಧನಾಗದಿರು - ***
ದೃಷ್ಟ ಜೀವನ ಚಲಿಸುವ ಬಮ್ದಿಯಾದರೆ
ಕಷ್ಟದ ಒಂಟಿತನ ಗಾಳಿ ತೆಗೆದಂತೆ
ಇಷ್ಟರು, ನೆಂಟರು ನೂಕಲು ಸಹಕರಿಸುವರು
ನಷ್ಟ ಆ ಜೀವನ , ಬರೀ ನೂಕುವುದಾದರೆ - ***
ತನಗಿಂತ ಹಿರಿದಾದೊದ್ದಂಶ, ಕಿರಿದಾದೊದ್ದಂಶ
ಮನ ಕುಣಿಯುವುದು ಹಿರಿ-ಕಿರಿಗಳ ನೆನೆದು
ಉನ್ನತದಿ ನಿಂತು ನೋಡು ಈ ದ್ವಂದ್ವಗಳ
ನಿನ್ನ ಪ್ರತಿಭೆಯ ನೀ ವಿಕಸಿಸೋ - ***
ಹಳೆದನ್ನು ನೆನೆದು , ಹೊಸತನ್ನು ಮರೆಯುವುದು
ಘಳಿಗೆಗಳ ಎದಿರುನೋಡುವುದು , ಕ್ಷಣಗಳ ಸವಿಯದೆ
ಬಾಳ್ವೆ ಹೊಸಜಾಗದಲ್ಲಿ ಒಂಟಿಯಾಗಿ
ತಾಳ್ಮೆ ಬೆಳೆಸುವುದು ನಿನ್ನಲ್ಲಿ - ***
Friday, August 1, 2008
Subscribe to:
Post Comments (Atom)
No comments:
Post a Comment