Sunday, August 24, 2008

ನೈಜಗುಣ

ಸ್ವಭಾವಸಿದ್ಧವಾಗಿ, ಹುಟ್ಟಿನಿಂದಲೇ ಬಂದಿರುವ ಗುಣ.

ಗೀತಾವಾಕ್ಯ: ಎಲ್ಲೆಲ್ಲಿ ಏನೇನು ಹುಟ್ಟುತ್ತದೆಯೋ (ಆಕಾರ ಅಥವಾ ಕ್ರಿಯೆ ಎಂಥದ್ದಾದರಾಗಲಿ) ಅದಕ್ಕೆಲ್ಲ ಮೊದಲ ತಾಯಿ ಪ್ರಕೃತಿ : ಮೊದಲ ತಂದೆ ಈಶ್ವರ ಅಥವಾ ಪುರುಷ. ಅವರೇ ಆದಿ ದಂಪತಿಗಳು. ಆ ದಂಪತಿಗಳಿಬ್ಬರು ಬೇರೆ ಬೇರೆಯಾದ ಇಬ್ಬರೆ ಅಥವಾ ಒಬ್ಬರೆಯೇ? - ಇದು ದೊಡ್ಡ ಪ್ರಶ್ನೆ ಇದಕ್ಕೆ ಉತ್ತರ ಗೀತೆಯಲ್ಲಿ ಇದೆ - ಇದನ್ನು ಮುಂದಿನ ಅಂಕಣದಲ್ಲಿ ನೋಡೋಣ.

ಈ ಇಬ್ಬರಲ್ಲಿ ಪ್ರಕೃತಿಯ ಸ್ವರೂಪ, ಈ ಅಂಕಣದ ವಿಷಯಕ್ಕೆ ಹತ್ತಿರವಾದದ್ದು.
ಸತ್ವ, ರಜಸ್ಸು, ತಮಸ್ಸು - ಈ ಗುಣಗಳು ಪ್ರಕೃತಿಯಿಂದ ಹುಟ್ಟಿದುದಾಗಿ, ದೇಹಿಯಾದ ಆತ್ಮನು ಅವಿಕಾರ್ಯನಾಗಿದ್ದರೂ ಅವನನ್ನು ದೇಹದಲ್ಲಿ ಕಟ್ಟಿಹಾಕುತ್ತದೆ. ಹೀಗೆ ಅವಿಕಾರ್ಯನು ವಿಕೃತನಾಗುತ್ತಾನೆ. ಅವಿಕಾರ್ಯವಾದ ವಸ್ತುವಿಗೆ ವಿಕಾರ ತರುವುದು ಪ್ರಕೃತಿಯ ತ್ರಿಗುಣ ಮಹಿಮೆ. ಆದ್ದರಿಂದ ಪ್ರಪಂಚವು "ಪಂಚಭೂತಾತ್ಮಕ" ಅನ್ನುವುದಕ್ಕಿಂತ ಪ್ರಪಂಚ ಬಂಧನವು "ತ್ರಿಗುಣಾತ್ಮಕ" ಎನ್ನುವುದು ಸೂಕ್ತ.

ಗುಣ ಎಂದರೆ ಏನು?: ಒಂದು ವಸ್ತುವಿನಲ್ಲಿರುವ ಯಾವ ಸಹಜ ಶಕ್ತಿಯು (ನೈಜ ಲಕ್ಷಣ), ಆ ವಸ್ತುವಿಗೆ ಇನ್ನೊಂದು ವಸ್ತುವಿನೊಡನೆ ಸ್ನೇಹ/ವೈರ ಸಂಭಂಧವನ್ನೂ ಉಂಟುಮಾಡಬಲ್ಲದ್ದಾಗಿರುತ್ತದೆಯೋ ಆ ಶಕ್ತಿಯು (ಅಥವಾ ಲಕ್ಷಣ) ಆ ವಸ್ತುವಿನ ಗುಣವೆನಿಸುತ್ತದೆ. ಅದು ಒಬ್ಬ ಪ್ರತಿಯೋಗಿ (couterpart) ಯನ್ನು ಅಪೇಕ್ಷಿಸುತ್ತದೆ. ಹೀಗೆ ಗುಣ ಸದ್ವಿತೀಯವಾದದ್ದು. ಗುಣದಿಂದ ಜಗತ್ತು, ಸಂಸಾರ. ಎಲ್ಲಿಯವರೆಗೆ ಗುಣ ಉಂಟೋ ಅಲ್ಲಿಯವರೆಗೆ ಪ್ರಪಂಚ ಉಂಟು. ಗುಣಾತೀತನಾದವನು ಪ್ರಪಂಚಾತೀತನಾಗಬಲ್ಲನು.

ಗುಣ ಎಂಬುದು ಸಹಜ ಪ್ರವೃತ್ತಿ (ಅಂತರಂಗದಲ್ಲಿ ಸ್ವತ: ಕಾಣಿಸಿಕೊಳ್ಳುವ ಪ್ರವೃತ್ತಿ, ಅಥವಾ ಪ್ರೇರಣೆ, ಅಥವಾ ವಾಸನೆ). ಇದಕ್ಕೆ ಇಂಗ್ಲಿಷಿನಲ್ಲಿ ಸಮಂಜಸ ಪದಗಳು - Impulse or propensity.

Let us consider vasanas, denoted as V, of a Jeevi, J, at his Nth birth (or Nth form) as: V_JN.

This V of a Jeevi J at his every birth N (or every form, N → ∞) interacts with other Jeevis, and undergoes modifications – positive or negative and result in a newly formed vasana denoted as V_JN+1

V_JN ↔ { V_J1A, V_J2B, … V_JxC } → V_JN+1 ( A, B, C → ∞ and x = any finite value)

This newly formed vasana (V_JN+1 ) will be carried as an input for the next birth.


ಗುಣಗಳು ಮೂರೆಂಬುದು ತತ್ವದ ಮಾತು, ಹಾಗು, ಗುಣಗಳು ಬೆರೆತೇ ಇರಬೇಕು, ಹಾಗು ವಿಷಮದಲ್ಲಿರಬೇಕು. ಹೀಗಿರುವಾಗ ವಿವೇಕಿಯು ಮಾಡಬೇಕಾದದ್ದು: ಸತ್ವಗುಣದ ಉತ್ಕರ್ಷ ಸಾಧನೆ. ಅಂದರೆ, ಲೋಕದಲ್ಲಿ ಸತ್ವಾಂಶ ಹೆಚ್ಚುವಂತೆಯೂ ಅದರೊಡನೆ ರಜಸ್ಸಿನ ಅಂಶವು ತಮಸ್ಸಿಗಿಂತ ಹೆಚ್ಚಾಗಿ ಬೇರೆಯುವಂತೆಯೂ ತನ್ನಿಂದ ಸಾಧ್ಯವಾದಷ್ಟು ಅಳವಡಿಸಬೇಕು!.

ತ್ರಿಗುಣ ಸ್ವರೂಪ ಭೇಧ:
ಸತ್ವ: ಸ್ವಭಾವ:ನಿರ್ಮಲ; ಲಕ್ಷಣ:ಪ್ರಕಾಶ; ಕಾರ್ಯ:ಜ್ಞಾನ; ಫಲ: ಸುಖ; ಪರಿಣಾಮ: ಶಾಂತಿ
ರಜಸ್ಸು: ಸ್ವಭಾವ:ಕಾಮ,ಕ್ರೋಧ; ಲಕ್ಷಣ:ಅತಿರೇಕ, ಆವೇಶ; ಕಾರ್ಯ:ಕರ್ಮ ಪ್ರವೃತ್ತಿ; ಫಲ: ತೃಶ್ಣೆ, ಉಧ್ವೇಗ; ಪರಿಣಾಮ: ಪರಿಭ್ರಮಣೆ
ತಮಸ್ಸು: ಸ್ವಭಾವ:ಮೋಹ ; ಲಕ್ಷಣ:ಅಪ್ರವೃತ್ತಿ ; ಕಾರ್ಯ:ಅಜ್ಞಾನ; ಫಲ: ಪ್ರಮಾದ, ಆಲಸ್ಯ ; ಪರಿಣಾಮ: ದುಃಖ

ತ್ರಿಗುಣಗಳನ್ನು ಮೀರಬೇಕು: ಇದು ಗೀತೆಯ ಉಪದೇಶ.
ಆ ಮೀರುವುದೆಂಬುದೂ ಒಂದು ಗುಣದಿಂದ ಅಲ್ಲವೇ? ಅದೆಂಥ ಗುಣ?
ಉತ್ತರ: ಸತ್ವಗುಣ.

ಸತ್ವ ಎರಡು ವಿಧ: ಒಂದು ರಜಸ್ಸು ತಮಸ್ಸುಗಳೊಡನೆ ಬೆರೆತುಕೊಂಡಿರುವುದು (ಮಿಶ್ರ ಸತ್ವ); ಇನ್ನೊಂದು ಅವೆರಡರ ಸಹವಾಸವೇ ಇಲ್ಲದೆ ತಾನೆ ತಾನಾಗಿ ಸಂಪೂರ್ಣವಾಗಿರುವುದು (ಶುದ್ದಸತ್ವ). ಮಿಶ್ರ ಸತ್ವವನ್ನು ವಿಶ್ರಿತಾಂಶಗಳಿಂದ ಬೇರ್ಪಡಿಸಿ ಶುದ್ದಗೊಳಿಸಿ ಬಲಪಡಿಸಿದಾಗ ಅದು ಮುಕ್ತಿಗೆ ದಾರಿಯಾಗುತ್ತದೆ.

ಶುದ್ದಸತ್ವದ ರೂಪ

ಶುದ್ದಸತ್ವದ ರೂಪ:

ಸಾತ್ವಿಕ ಕರ್ಮಗಳಲ್ಲಿ ಶ್ರದ್ಧೆಯನ್ನಿರಿಸುವುದು ಜೀವೂನ್ನತಿ, ಹಾಗು ತ್ರಿಗುಣಗಳ ಧಮನಕ್ಕೆ ಮಾರ್ಗ. ಶ್ರದ್ಧೆ ಬುದ್ಧಿಗೆ ಸ್ಫೂರ್ತಿ, ಬುದ್ಧಿ ಶ್ರದ್ಧೆಗೆ ಶಕ್ತಿ . ಬುದ್ಧಿ-ಶ್ರದ್ದೆ ಐಕ್ಯವೇ ಸಿದ್ಧಿ.

೧. ತ್ರಿಗುಣಗಳು ಜೀವವನ್ನು ಬಂಧಿಸಿಹುವು ಎಂಬುದನ್ನೂ ಸದಾ ನೆನಪಿನಲ್ಲಿರಿಸಬೇಕು.
೨. ಯಾವ ವಿಷಯಗಳಲ್ಲಿ ಬುದ್ದಿ-ಪ್ರಯೋಗ, ಯಾವ ವಿಷಯಗಳಲ್ಲಿ ಶಾಸ್ತ್ರ-ಪ್ರಯೋಗ ಎಂಬುದನ್ನೂ ನಿರ್ಧರಿಸಬೇಕು.
೩. ನಾವು ಯಾವುದರಲ್ಲಿ ನಂಬಿಕೆ ಅಥವಾ ಶ್ರದ್ದೆಯನ್ನಿದುವಾಗ ಬುದ್ದಿ-ಜಾಗರೂಕತೆ ಇರಬೇಕು. ನಮ್ಮ ಶ್ರದ್ಧೆಯಂತೆ ನಾವು.
೪. ಮಾಡುವ "ಸತ್" ಕೆಲಸಗಳಲ್ಲಿ ಶ್ರದ್ಧೆಯಿಡಬೇಕು. ಲೋಕದಲ್ಲಿ ಯಾವ ಯಾವ ವಾಕ್ಕು, ಗ್ರಂಥ, ಪ್ರಯತ್ನ, - ಭಗವತ್ ಪ್ರಯುಕ್ತವಾದುದ್ದೂ , ಪೂಜಾರ್ಹವೋ, ಪವಿತ್ರವೋ, ಅದೆಲ್ಲ "ಓಂ ತತ್, ಸತ್" ಎಂಬುದರಲ್ಲಿ ಸೇರಿದ್ದು. "ಓಂತತ್ಸತ್" ಪದವು ಎಲ್ಲ ದೃಷ್ಟಿಯಿಂದಲೂ ಶದ್ಧಾರ್ಹವಾಗಿದೆ. ಆದದ್ದರಿಂದ ಸತ್ಕ್ರಿಯೆಗಳಲ್ಲಿ ಶ್ರದ್ಧೆ ಇಡಬೇಕು ಎನ್ನುವುದನ್ನು "ಓಂತತ್ಸತ್" ಪದವು ಸಾರುತ್ತದೆ.

No comments: