Monday, March 1, 2010

ಮಂಕುತಿಮ್ಮನ ಕಗ್ಗದ ನುಡಿ ಮುತ್ತುಗಳು - 55 Fundas from Kagga

1. ವಸ್ತು ಸಾಕ್ಷಾತ್ಕಾರ ಅಂತರೀಕ್ಷಣೆಯಿಂದ, ಶಾಸ್ತ್ರಿತನದಿಂದಲ್ಲ – ೬೫
2. ಒಂಟಿ ನೀನೊಳಜಗಕೆ ಭಂಟ ಹೊರಜಗಕಾಗಿ, ಒಂಟಿಸಿಕೊ ಜೀವನವ – ೭೩
3. ಲೋಕದಲಿ, ಜಾತಿಯಲಿ, ವ್ಯಕ್ತಿಯಲಿ, ಸಂಸ್ಥೆಯ ಸಾಕಲ್ಯದ (ಪರಿಪೂರ್ಣದ) ಅರಿವಿರಲಿ. - ೧೩೪
4. ನಿತ್ಯ ಪರಿವರ್ತನೆಯ ಚೈತನ್ಯ ನರ್ತನೆಯ ಸತ್ಯ ಜಗದಲಿ ಕಾಣೋ - ೧೩೯
5. ಸ್ಥೂಲ ವಿವಿಧದಿ ಬಾಳಿ, ಸೂಕ್ಷ್ಮ ಸಾಮ್ಯವ ತಾಳಿ, ಆಳುತಿರು ಜೀವನವ. - ೧೪೨
6. ಬರಲಿ ಬರುವುದು, ಸರಿವುದೆಲ್ಲ ಸರಿಯಲಿ, ನಿನಗೆ ಪರಿವೆಯೇನಿಲ್ಲೆಲವೋ - ೧೫೦.
7. ವಿಜ್ಞಾನ, ಶಾಸ್ತ್ರ, ಕಲೆ, ಕಾವ್ಯ ವಿದ್ಯೆಗಳೆಲ್ಲ ಧನ್ಯತೆಯ ಬೆದಕಾಟ. - ೨೨೭.
8. ವೆಸನಮಯ ಸಂಸಾರದಲಿ ವಿನೋದವ ಕಾಣ್ಬ ರಸಿಕತೆಯೆ ಯೋಗವೆಲೊ - ೨೪೧
9. ಊಳಿಗವೋ ಕಾಳಗವೊ ಕೂಳ್ಕರೆಯೋ ಗೋಳ್ಕರೆಯೋ ಬಾಳು ಬಾಳದೆ ಬಿಡದು - ೨೪೯.
10. ಪಾಟವವು (ಸಾಮರ್ಥ್ಯ) ಮೈಗಿರಲಿ, ನೋಟ ತತ್ವದೊಳಿರಲಿ, ಪಾಟಿಸು (ಸಾಧಿಸು) ಸಮನ್ವಯವ - ೨೬೧
11. ತಿದ್ದಿಕೊಳೋ ನಿನ್ನ ನೀಂ ; ಜಗವ ತಿದ್ದುವುದಿರಲಿ - ೨೯೨
12. ಪೂರ್ವಿಕರು, ಜತೆಯವರು, ಬಂಧು ಸಖ ಶತ್ರುಗಳು ; ಸರ್ವರಿಂ ನಿನ್ನ ಗುಣ -೩೩೮
13. ಸಹಿಸದಲ್ಲದೆ ಮುಗಿಯದಾವ ದಶೆ ಬಂದೊಡಂ , ಸಹನೆ ವಜ್ರದ ಕವಚ - ೩೬೬
14. ಅಂತಾನುಂಮಿಂತಾನುಂಎಂತೋ ನಿನಗಾದಂತೆ ಶಾಂತಿಯನೆ ನೀನರಸು ಮನ ಕೆರಳಿದಂದು . ಸ್ವಾನ್ತಮಂ ತಿದ್ದುತಿರು - ೩೭೯
15. ಮಕ್ಕಳ ಭವಿಷ್ಯಕ್ಕೆ ಕುಕ್ಕುಳಿತಗೊಳಬೇಡ (ಕಳವಳದ ಆಸೆ ಪಡಬೇಡ) , ದಿಕ್ಕವರಿಗವರವರೆ – ೪೨೦
16. ಆತ್ಮ ವಿಸ್ತಾರವಾಗಿಪುದೆ ನಿತ್ಯ ಸುಖ. ಒಟ್ಟು ಬಾಳ್ವುದ ಕಲಿಯೋ – ೪೩೨
17. ಬಿದ್ದುದನು ನಿಲ್ಲಿಪುದೆ ನರನ ಮೃತ್ಯುಂಜಯತೆ . ಬಿದ್ದ ಮನೆಯನು ಕಟ್ಟೋ – ೪೭೪
18. ಗೌರವಿಸು ಜೀವನವ ಗೌರವಿಸು ಚೇತನವ – ೪೭೫
19. ಅಂಗಡಿಯ ಮಾಡದಿರು ಸುಕೃತಪ್ರಸಕ್ತಿಯಲಿ. ಪೊಂಗುವಾತ್ಮವೇ ಲಾಭ - ೪೯೮
20. ಗಿಣಿಯೋದು ಪುಸ್ತಕಜ್ಞಾನ ; ನಿನ್ನನುಭವವೆ ನಿನಗೆ ಧರ್ಮದ ದೀಪ . – ೫೪೪
21. ಮನ್ನಿಸಲಿ ವಿಧಿ ನಿನ್ನ ಬೇಡಿಕೆಯ , ಭಿನ್ನಿಸಲಿ , ನಿನ್ನ ಬಲವನ್ನು ಮೆರಸೋ – ೫೫೧
22. ಶಕ್ತಿಮೀರ್ದ ಪರೀಕ್ಷೆಗಳನು ವಿಧಿ ನಿಯಮಿಸಿರೆ , ಯುಕ್ತಿಮೀರ್ದ ಪ್ರಶ್ನೆಗಳನು ಕೇಳುತಿರೆ ; ಚಿತ್ತವನು ತಿರುಗಿಸೋಳಗಡೆ , ನೋಡು ನೋಡಲ್ಲಿ ! – ೫೫೬
23. ಹೋರಾಡು ಬೀಳ್ವನ್ನವೋಬ್ಬೊಂಟಿಯಾದೊಡಂ, ಹೋರಿ ಸತ್ವವ ಮೆರಸು – ೫೭೩
24. ನಿನ್ನ ಶಕ್ತಿಯನಳೆದು , ನಿನ್ನ ಗುಣಗಳ ಬಗೆದು , ಸನ್ನಿವೇಶದ ಸೂಕ್ಷ್ಮವರಿತು , ಧ್ರುತಿದಳೆದು , ನಿನ್ನ ಕರ್ತವ್ಯ ಪರಿಧಿಯ ಮೀರದೆ ಕೆಲಸ ಮಾಡು – ೫೭೬
25. ಎದೆಯನುಕ್ಕಾಗಿಸುತ , ಮತಿಗದೆಯ ಪಿಡಿದು ನೀನೆದುರು ನಿಲೆ ಬಿದಿಯೋಲಿವ – ೫೯೮
26. ಇರುವ ಕೆಲಸವ ಮಾಡು ಕಿರಿದೆನದೆ ಮನವಿಟ್ಟು. ದೊರೆತುದ ಹಸಾದವೆಂದುಣ್ಣು ಗೊಣಗಿಡದೆ . ಧರಿಸು ಲೋಕದ ಭಾರವ ಪರಮಾರ್ಥವನು ಬಿಡದೆ - ೬೦೧
27. ಕಾವಿರದೆ ಪಕ್ವವಹ ಜೀವವಿಳೆಯೋಳಗಿರದು. ನೋವೆಲ್ಲ ಪಾವಕವೋ – ೬೦೯
28. ಚಿತ್ತ ಸಂಸ್ಕಾರ ಸಾಧನವಯ್ಯ ಸಂಸಾರ - ೬೧೦
29. ಧರಿಸು ಜೀವನಧುರವ . ಚರಿಸು ಲೋಕದ ಮಾರ್ಗಗಳಲ್ಲಿ ಹಿತವರಿತು – ೬೨೧
30. ಪರಿಣಾಮದಲಿ ಧನಿಕ ಬಡವರೀರ್ವರುಮೊಂದೆ – ೬೩೧
31. ತುಂಬು ವಿರತಿಯ ಮನದಿ . ೬೩೮
32. ಮುಗ್ಧನಾಗದೆ ಭುಜಿಸು ಭುಜಿಸಲಿಹುದನು ಜಗದಿ - ೬೩೯
33. ತೊರೆದೆಲ್ಲ ಧಂಭಗಳ ನೀನೆ ನಿನ್ನಾಳಾಗು , ಪರದೇಶಿವೋಲು ಬಾಳು – ೬೪೦
34. ಗೋಳ್ಕರೆದರೇನು ಫಲ ಗುದ್ದಾಡಿದರೇನು ಫಲ , ಪಲ್ಕಿರಿದು ತಾಳಿಕೊಳೋ – ೬೪೩
35. ಗೆದ್ದುದೇನೆಂದು ಕೇಳದೆ , ನಿನ್ನ ಕೈಮೀರೆ ಸದ್ದು ಮಾಡದೆ ಮುಡುಗು -೬೬೨
36. ತನುವಿಗುಪಕ್ರುತಿಗೆಯ್ವ ಭರದಿ ನೀನಾತುಮದ ಅನುನಯವ ಕೆದಿಸದಿರು – ೬೬೭
37. ಈಗಲೋ ಆಗಲೋ ಎಂದೋ ಮುಗಿವುಂಟು ಎಂಬ ಭಾಗ್ಯವನು ನೆನೆದು ನಲಿ – ೬೬೯
38. ಮುಂದೆನಾಗುವುದೆಂಬ ಮಾತೇಕೆ ? ಹೊಂದಿಸುವನಾರೋ , ನಿನ್ನಾಳಲ್ಲ , ಬೇರಿಹನು . ಇಂದಿಗಿಂದಿನ ಬದುಕು – ೬೮೧
39. ನಿರ್ಮಿತ್ರನಿರಲು ಕಲಿ – ೬೮೯
40. ಎರಡು ಕೋಣೆಗಳ ಮಾಡು ನೀಂ ಮನದಾಲಯದಿ . ಹೊರಕೋಣೆಯಲಿ ಲೋಗರಾಟಗಳನಾಡು . ವಿರಮಿಸೋಬ್ಬನೆ ಮೌನದೊಳಮನೆಯ ಶಾಂತಿಯಲಿ - ೭೦೧
41. ಮಮತೆಯಳಿವಿಂ ಜ್ಞಾನ ; ಪಾಂದಿತ್ಯದಿಂದಲ್ಲ . – ೭೦೪
42. ಭರತನ ಹಾಗೆ ಸ್ವತ್ವದಾಷೆಯ ನೀಗಿ ಬಾಳು – ೭೧೦
43. ಅಳಲು, ದುಗುಡಗಳ ನಿನ್ನೊಳಗೆ ಬಚ್ಚಿಟ್ಟಿಕೋ. ನೀನಿಳೆಗೆ ಹರಡಬೇಡ – ೭೧೯
44. ಹುಲ್ಲಾಗು ಬೆಟ್ಟದಡಿ ಮನೆಗೆ ಮಲ್ಲಿಗೆಯಾಗು ಕಲ್ಲಾಗು ಕಷ್ಟಗಳ ಮಳೆಯ ವಿಧಿ ಸುರಿಯೆ, ಬೆಲ್ಲ ಸಕ್ಕರೆಯಾಗು ದೀನ ದುರ್ಬಲರಿಂಗೆ, ಎಲ್ಲರೊಳಗೊಂದಾಗು - ೭೮೯
45. ಎನಾನುಮಂ ಮಾಡು ಕೈಗೆ ದೊರೆತುಜ್ಜುಗವ, ನಾನೇನು ಹುಲುಕಡ್ಡಿ ಎಂಬ ನುಡಿ ಬೇಡ - ೭೯೦
46. ತೊಟ್ಟು ನಿರಹಂಕೃತಿಯ ಕವಚವನು ನೀಂ ಪೋರು, ಮುಟ್ಟದಿಳೆಯಸಿ ನಿನ್ನ -೮೧೨
47. ತಾನಾಗಿ ಗಾಳಿವೊಲ್ ಬಂದ ಸುಖವೇ ಸುಖ. ನೀನೆ ಕೈ ಬೀಸಿಕೊಳೆ ನೋವು ಬೆವರುಗಳೇ ಫಲ = ೮೨೧
48. ಕೊಳದ ಜಲ ನಿನ್ನ ಮನ - ೮೨೯
49. ಆವುದೋ ಮನದ ಬಡಿದಾಟವನು ನಿಲಿಸಿ ನೆಮ್ಮದಿಯನೀವೊಡದೆ ಬಿಡುಗಡೆಯೊ ಜೀವಕ್ಕೆ - ೮೩೨
50. ಬೀಳಿಸದಿರೆಲೋ ನಿನ್ನ ನೆರಳನಿತರರ ಮೇಲೆ. ಬಾಳಿಕೊಳುವವರು ತಂತಮ್ಮ ಬೆಳಕಿನಲಿ - ೮೪೪
51. ಹೃದಯ ವೊಳಿತಾದೊಡೇ೦ ? ತಿಳಿವಿಹುದೆ? ಜಾಣಿಹುದೆ? - ೮೬೩
52. ತಾರತಮ್ಯ ವಿವೇಕವರಿಯದಾ ಸಂಸ್ಕಾರ, ಪ್ರೇರಕವೋ ಚೌರ್ಯಕ್ಕೆ - ೮೭೧
53. ದುಡುಕದಿರು ತಿದ್ದಿಕೆಗೆ - ೮೭೮
54. ಲಕ್ಷ್ಯ ತಪ್ಪದೆ ಚರಿಸು ಸಾಮಾನ್ಯ ಧರ್ಮಗಳ, ಮೋಕ್ಷ ಸ್ವತಸಿದ್ದ - ೯೦೩
55. ತ್ಯಜಿಸಿ ಭುಜಿಸಲ್ಕಲಿತವನೆ ಜಗಕೆ ಯಜಮಾನ - ೯೦೮